ಭಾನುವಾರ, ಮೇ 23, 2010

ಮಂಜಿನ ಮಳೆ ಸುರಿಯುತ್ತಿದೆ, ಏರ್ ಫ್ಲಾರಿಡಾ 90 ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ.


ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಸಂಶಯ ಮೂಡತ್ತದೆ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ.

ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ.

ಪೈಲಟ್: ಕಾಕ್ ಪಿಟ್ ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ.

ಕೋ ಪೈಲಟ್: ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ.

ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಅ್ಯಂಟಿ ಐಸ್ ಸಿಸ್ಟಂ ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ.

ಕೋ ಪೈಲಟ್: ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಎಲ್ಲ ಸರಿಯಾಗಿದೆಯಾ? ಇಲ್ಲ ಇದೇನೋ ಸರಿ ಇಲ್ಲ...
ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ.

ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ...

(ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ಹೈ ಆಗೇ ತೋರಿಸ್ತಿತ್ತು. ಎಂಜಿನ್ ಬೇಕಾದ ಪಾವರ್ ಕೊಡ್ತಿರಲೇ ಇಲ್ಲ. ಅದು ತಪ್ಪು ರೀಡಿಂಗ್ಸ್ ತೋರಿಸ್ತಿತ್ತು... ಕ್ಯಾಪ್ಟನ್ ಗೆ ಅನಿಸ್ತಿತ್ತು ಎಂಜಿನ್ ನಿಂದ ಅಗತ್ಯ ಪಾವರ್ ಲಭ್ಯವಾಗ್ತಿದೆ. ಟೇಕಾಫ್ ಮುಂದುವರಿಸಬಹುದು ಎಂದು...)
ಕ್ಯಾಪ್ಟನ್: ಕಮಾನ್ ಫಾರ್ವರ್ಡ್, ಫಾರ್ವರ್ಡ್... ಓಹ್ ಮೇಲಕ್ಕೇರುತ್ತಲೇ ಇಲ್ಲ... ಎಂಜಿನ್ ಸ್ಥಗಿತಗೊಳ್ಳುತ್ತಿದೆ.. ನಾವು ಕೆಳಕ್ಕೆ ಬೀಳುತ್ತಿದ್ದೇವೆ...

ಕೋ ಪೈಲಟ್: ನಾವು ಕೆಳಕ್ಕೆ ಹೋಗುತ್ತಿದ್ದೇವೆ..

ಪೈಲಟ್: ನಂಗೊತ್ತು...

ವಿಮಾನ ಕ್ಷಣಾರ್ಧದಲ್ಲೇ ಒಂದು ಸೇತುವೆಗೆ ಅಪ್ಪಳಿಸಿ ಮಂಜು ತುಂಬಿದ ನೀರಲ್ಲಿ ಬೀಳುತ್ತದೆ..

ಎಂಜಿನ್ ಗೆ ಮಂಜು ಹೊಕ್ಕು ಅಲ್ಲಿ ಗಾಳಿಯ ಚಲನೆಗೆ ಅಡ್ಡಿ ಮಾಡಿತ್ತು. ಅಲ್ಲಿನ ಸೆನ್ಸರಿಗೆ ಗರಬಡಿದಿತ್ತು. ಎಂಜಿನ್ ರೀಡಿಂಗ್ ಮೋಸ ಮಾಡಿತ್ತು. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿತ್ತು.. ಟೇಕಾಫ್ ಮಾಡಲೇಬಾರದಾಗಿತ್ತು. ಆದರೂ ಕಡೆ ಘಳಿಗೆಯಲ್ಲಿ ಪೈಲಟ್ ಟೇಕಾಫ್ ಮಾಡಿಬಿಟ್ಟ. ಕೇವಲ 24 ಸೆಕೆಂಡುಗಳಲ್ಲಿ ಎಂಜಿನ್ ಫೇಲ್ ಆಯ್ತು. ಆ ನಂತರದ ಎಂಟು ಸೆಕೆಂಡುಗಳ್ಲಿ ವಿಮಾನ ಸೇತುವೆಯೊಂದಕ್ಕೆ ಅಪ್ಪಳಿಸಿತು. ಸೇತುವೆಯ ಮೇಲೆ ಕಾರಿನಲ್ಲಿ ಪಯಣಿಸುತ್ತಿದ್ದವರು ಸೇರಿದಂತೆ ಎಷ್ಟೊ ಜನ ಸತ್ತೇ ಹೋದರು. ಕೆಲವರು ಪವಾಡಸದೃಶ ಪಾರಾದರು. ಘಟನೆ ಸಂಭವಿಸಿದ ಕೆಲವೇ ಸಮಯದಲ್ಲಿ ರಕ್ಷಣಾ ಹೆಲಿಕಾಪ್ಟರ್ ಸ್ಥಳಕ್ಕೆ ಧಾವಿಸಿತು. ಮಂಜಿನಿಂದಾವೃತವಾದ ನೀರಿನಲ್ಲಿ ಕೆಲವರಿಗೆ ಕೈಕಾಲೇ ಆಡುತ್ತಿಲ್ಲ. ಒಬ್ಬ ಹೆಣ್ಣುಮಗಳಂತೂ ನಿತ್ರಾಣಳಾಗಿ ಮಂಜುಗಡ್ಡೆಗಳ ನಡುವೆ ಸಿಕ್ಹಾಕಿಕೊಂಡು ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದಳು. ಅವಳನ್ನು ರಕ್ಷಣಾ ಸಿಬ್ಬಂದಿ ಅನಾಮತ್ತಾಗಿ ಎತ್ತಿಕೊಂಡಿತು. ಅವಳ ಜೀವ ಉಳಿಸಿತು.
ಇದಷ್ಟನ್ನು ಯುಟ್ಯುಬ್ ವಿಡಿಯೊ ಸವಿವರ ನೀಡಿದ್ದು. ವಿಮಾನ ಟೇಕಾಫ್ ಆಗುವ ಯಥಾವತ್ ಚಿತ್ರಣ... ಕಾಕ್ ಪಿಟ್ ನಲ್ಲಿ ಪೈಲಟ್, ಕೋ ಪೈಲಟ್ ಮಾತನಾಡುವುದು, ವಿಮಾನ ಚಾಲನೆಗೆ ಏನೆಲ್ಲ ಸಿಸ್ಟಂ ಇದೆ, ರೀಡಿಂಗ್ ಹೇಗೆ ತೋರಿಸತ್ತದೆ, ಯಾವ ನಾಬ್ ಒತ್ತಿದರೆ ಯಾವುದು ಕೆಲಸ ಶುರುವಾಗುತ್ತೆ, ಮತ್ತು ಎಂಜಿನ್ ಫೇಲ್ ಆದಾಗ ಏನೆಲ್ಲ ಕಾಕ್ ಪಿಟ್ ನಲ್ಲಿ ನಡೆಯುತ್ತೆ ಎಂದೆಲ್ಲ ವಿವರಿಸಿತು ವಿಡಿಯೊ...
ಬ್ಲ್ಯಾಕ್ ಬಾಕ್ಸ್ ನಲ್ಲಿ ರೆಕಾರ್ಡ್ ಆದ ಪೈಲಟ್, ಕೊ ಪೈಲಟ್ ಸಂಭಾಷಣೆ, ಅಪಘಾತ ನಡೆದಿದ್ದಕ್ಕೆ ಎಲ್ಲ ಸಾಕ್ಷ್ಯಗಳನ್ನು ಅದು ಹೇಗೆ ಬಚ್ಚಿಟ್ಟುಕೊಳ್ಳುತ್ತೆ, ಅದರ ಆಧಾರದಲ್ಲಿ ಮತ್ತು ಏರೋನಾಟಿಕ್ಸ್ ತಂತ್ರಜ್ಞಾನದ ಆಧಾರದಲ್ಲಿ ಅಪಘಾತಕ್ಕೆ ಸ್ಪಷ್ಟವಾದ ತಾಂತ್ರಿಕ ದೋಷಗಳನ್ನು ತಜ್ಞರು ಏನಲ್ಲ ಜ್ಞಾನ ಬಳಸಿ ಕಂಡುಕೊಳ್ಳುತ್ತಾರೆ? ಎನ್ನುವ ಎಲ್ಲ ಕುತೂಹಲಗಳನ್ನು ಎಳೆ ಎಳೆಯಾಗಿ ವಿಡಿಯೊ ತೋರಿಸಿತು.


ಇದು ಮುದ್ರಣ ಮಾಧ್ಯಮದಲ್ಲಿ ಸಾಧ್ಯವಾ?


ಮುದ್ರಣ ಮಾಧ್ಯಮಕ್ಕೆ ಇಂಥ ಅನುಭವ ಕಟ್ಟಿಕೊಡಲು ಸಾಧ್ಯವಾ? ಈ ವಿಡಿಯೊ ಗಮನಿಸಿ.

http://www.metacafe.com/w/68951/

















ಟ್ರಸ್ಟ್ ಸೆನ್ಸಸ್ ಮಂಜಿನಿಂದ ಬ್ಲಾಕ್ ಆಗದಂತೆ ತಡೆಯಲು ಮೊದಲ ಆದ್ಯತೆ ಕೊಡಬೇಕೆಂದು ಎವಿಯೇಷನ್ ಅಥಾರಿಟಿ ತಾಕೀತು ಮಾಡಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ